IEMS B-School

ಶಿಕ್ಷಣದ ಮಹತ್ವ

ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವ ಪೂರ್ಣವಾಗಿ ಪರಿಣಾಮ ಬೀರುವ ಅಂಶವಾಗಿದೆ.

"ವಿದ್ಯಾ ದದಾತಿ ವಿನಯಮ್ ವಿನಯಾದ್ ಯಾತಿ ಪಾತ್ರತಾಮ| 

ಪಾತ್ರತ್ವಾಮ್ ಧನಮಾಪ್ನೋತಿ ಧನಾತ್ ಧರ್ಮ ತತಃ  ಸುಕಮ್"||

         ದೇವಭಾಷೆ ಸಂಕೃತದಲ್ಲಿ ಹೇಳಿರುವಂತೆ ; ವಿದ್ಯೆಯು ವಿನಯವನ್ನು ಕೊಡುತ್ತದೆ, ಅದರಿಂದ ನಮ್ಮ ವ್ಯಕ್ತಿತ್ವ, ಪಾತ್ರ ನಿರ್ಮಾಣವಾಗುತ್ತದೆ , ಅದರಿಂದ ಧನವು ಸಂಗ್ರಹವಾಗುತ್ತದೆ , ಧನದಿಂದ ಧರ್ಮವು, ಧರ್ಮದಿಂದ ಸುಖವು ಪ್ರಾಪ್ತಿಯಾಗುತ್ತದೆ.

         ಮೇಲಿನ ಭಗವದ್ಗೀತೆಯ ಶ್ಲೋಕ ನೋಡಿದರೆ ನಮಗೆ ತಿಳಿದು ಬರುವುದೇನಂದರೆ ವಿದ್ಯೆಯು ನಮ್ಮ ದೇಶಕ್ಕೆ ಆಭರಣ ಆಗಬೇಕೇ ವಿನಹ ನಮಗೆ ಗರ್ವವನ್ನು ತರಬಾರದು. ಶಿಕ್ಷಣ ಒಂದು ಜಗತ್ತನ್ನೇ ಬದಲಾಯಿಸುವ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿದೆ. ನಮ್ಮ ದೇಶದ ಬೆಳವಣಿಗೆಗೆ ಶಿಕ್ಷಣವು ಪ್ರಬಲವಾದ ಪಾತ್ರವಹಿಸುತ್ತದೆ. ವಿದ್ಯಾವಂತ ಸಮಾಜವು ವಿದ್ಯಾವಂತ ರಾಷ್ಟ್ರಕ್ಕೆ ಕೊಡುಗೆ ನೀಡುತ್ತದೆ ಮತ್ತು ವಿದ್ಯಾವಂತ ರಾಷ್ಟ್ರವು ಪ್ರಗತಿಪರ ರಾಷ್ಟ್ರವಾಗಿದೆ. 

         ಇಲ್ಲಿ ಇದು ನಿಖರವಾಗಿ ಹೇಳುವುದೇನೆಂದರೆ ಶಿಕ್ಶಣವು ಇದು ಬಾಲ್ಯದಲ್ಲಿ ಅಭಿವೃದ್ಧಿಪಡಿಸಿದ ಮನುಷ್ಯನು ತನ್ನ ಅಭ್ಯಾಸ ಮತ್ತು ನಡವಳಿಕೆಯ ಉತ್ಪನ್ನ ಎಂದು ನಿರ್ದಿಷ್ಟಪಡಿಸುವ ಮೌಲ್ಯದ ಪದಗಳಿಂದ ಬರೆಯಲ್ಪಟ್ಟ ಪ್ರಸಿದ್ಧ ಸಾಲು.  ಅವನು ತನ್ನ ಬಾಲ್ಯದಲ್ಲಿ ಪಡೆಯುವ ಮೌಲ್ಯಗಳು ಮತ್ತು ಶಿಕ್ಷಣವು ಮನುಷ್ಯನನ್ನು ಉತ್ತಮವಾಗಿಮಾಡುತ್ತದೆ. ಮಕ್ಕಳು ಹದವಾಗಿ ಇರುವ ಮಣ್ಣಿನತರಹ ಅವರನ್ನು ಒಂದು ಮೂರ್ತಿಯನ್ನಾಗಿ ಮಾಡುವುದು ಶಿಕ್ಷಣದ ಉದ್ದೇಶವಾಗಿದೆ. ಶಿಕ್ಷಣ ಕೇವಲ ಪುಸ್ತಕದ ಜ್ಞಾನ ಬೆಳಿಸಿ ವಿವಿಧ ಪ್ರವೇಶಗಳಿಗೆ ಸಿದ್ಧಮಾಡುವುದು ಅಲ್ಲಾ ಮಕ್ಕಳಲ್ಲಿ ಸಮಗ್ರ ಬೆಳವಣಿಗೆಯನ್ನು ಬೆಳಿಸಬೇಕು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುವುದನ್ನು ನಾವು ಮೊದಲಿನಿಂದ ಕೇಳುತ್ತಾ ಬಂದಿದ್ದೇವೆ. ಇಂದಿನ ದಿನಗಳಲ್ಲಿ ಮಕ್ಕಳು ತುಂಬಾ ಬುದ್ಧಿವಂತರು ಮತ್ತು ಆತ್ಮವಿಶ್ವಾಸದಿಂದ ಕೂಡಿರುತ್ತಾರೆ ಮತ್ತು ಅವರಿಗೆ ಶಿಕ್ಷಣವನ್ನು ನೀಡುವದರಿಂದ ಮತ್ತು ಅವರ ಬುದ್ಧಿಮತೆಯನ್ನು ಸರಿಯಾದ ದಿಕ್ಕಿನಲ್ಲಿ ಸವಾಲು ಮಾಡುವ ಮೂಲಕ ರಾಷ್ಟ್ರಕ್ಕೆ ಸಕಾರಾತ್ಮಕ ಉತ್ತೇಜನವನ್ನು ನೀಡಬೇಕು..  ಆದ್ದರಿಂದ, ಮಕ್ಕಳ ಶಿಕ್ಷಣವನ್ನು ಆದಷ್ಟು ಬೇಗ ಪ್ರಾರಂಭಿಸಬೇಕು ಏಕೆಂದರೆ ಅವು ನಮ್ಮ ದೇಶದ ವಿಶೇಷತೆ ಮತ್ತು ರಾಷ್ಟ್ರದ ಏಳಿಗೆಗೆ ಹೆಜ್ಜೆ ಹಾಕುತ್ತವೆ. ಭಾರತದಲ್ಲಿ ಬಾಲ ಕಾರ್ಮಿಕ ಪದ್ಧತಿಯನ್ನು ಕಡಿಮೆ ಮಾಡುವುದು ಭಾರತೀಯ ಶಿಕ್ಷಣದ ಪ್ರಮುಖ ಕರ್ತವ್ಯವಾಗಿರಬೇಕು. ಏಕೆಂದರೆ ಶಿಕ್ಷಣ ಪಡೆಯದ ಮಕ್ಕಳನ್ನು ದುರುಪಯೋಗ ಪಡಿಸಿಕೊಳ್ಳುವವರೆ ಹೆಚ್ಚು. ಆದ್ದರಿಂದ ಉಚಿತ ಹಾಗೂ ಗುಣಮಟ್ಟದ ಶಿಕ್ಷಣವನ್ನು ಒದಗಿಸಬೇಕು. ಇದರಿಂದ ಅಭಿವೃದ್ಧಿ ಹೊಂದಿದ ದೇಶವಾಗಿ ಶಿಕ್ಷಣವು ಬಡತನದ ಕೆಟ್ಟ ಚಕ್ರವನ್ನು ಮುರಿಯುವ ನಿರ್ದೇಶನವಾಗಿದೆ.

          ಪ್ರತಿ ಮನೆಯಲ್ಲೂ ಕಂಪ್ಯೂಟರ್, ಲ್ಯಾಪಟಾಪ್, ಮೊಬೈಲ್ ,ಟ್ಯಾಬ್ ಇತ್ಯಾದಿ ಕಡ್ಡಾಯವಾಗಿರುವ  ಆಧುನಿಕ ಯುಗದಲ್ಲಿ ಪುಸ್ತಕಗಳು ಹಿಂಬದಿಯ ಆಸನವನ್ನು ಪಡಿದಿವೇ. ಇಂದಿನ ಪೀಳಿಗೆಯಲ್ಲಿ ಓದುವುದು ಕ್ರಮೇಣ ಕ್ಷೀಣಿಸುತ್ತಿರುವ ಅಭ್ಯಾಸವಾಗಿದೆ. ಜ್ಞಾನವನ್ನು ಬಿಚ್ಚಿಡುವುದನ್ನು ಹೊರತುಪಡಿಸಿ ಓದುವುದು ನಮ್ಮಲ್ಲಿ ತಾಳ್ಮೆಯನ್ನು ನೀಡುತ್ತದೆ.  ಆದ್ದರಿಂದ ಇಂದಿನ ಪೀಳಿಗೆಯಲ್ಲಿ ಓದುವಿಕೆಯನ್ನು ಸ್ಥಾಪಿಸಬೇಕು.

        ಈಗಿನ ಪೀಳಿಗೆಯ ಮಕ್ಕಳಲ್ಲಿ ಶಿಕ್ಷಕರ ಮೇಲೆ ಗೌರವಾನ್ವಿತ ಭಾವನೆ ಬೆಳೆಸುವದು ತಂದೆ ತಾಯಿಯ ಪ್ರಮುಖ ಉದ್ದೇಶವಾಗಬೇಕು. ಏಕೆಂದರೆ ವಿದ್ಯಾರ್ಥಿಯ ಏಳಿಗೆಗೆ ಶಿಕ್ಷಕರ ಮೇಲಿನ ಗೌರವ ಒಂದು ಪ್ರಮುಖ ಪರಿಣಾಮ ಬೀರುವ ಅಂಶವಾಗಿದೆ. 

"Education is a jewel in prosperity and a refuge in adversity"

ಅರಿಸ್ಟಾಟಲ್"

ಇಲ್ಲಿ ಅರಿಸ್ಟಾಟಲ್ ಅವರು " ಶಿಕ್ಷಣವು ಒಂದು ಆಭರಣ ಎಂದು ಹೇಳಿದ್ದಾರೆ ಮತ್ತು ಅದು ಯಾವದೇ ಪರಿಸ್ಥಿತಿಯಲ್ಲಿಯು ಸಹ ಸಹಾಯಕ್ಕೆ ಬರುತ್ತದೆ". ಅರಿಸ್ಟಾಟಲ್ ಅವರ ಈ ಒಂದು ವ್ಯಾಖ್ಯಾ ಯಾರದರಲ್ಲೂ ಹೆರೆಯರೆ ಆಗಲಿ ಕಿರಿಯರೆ ಆಗಲಿ ವೃದ್ದರೆ ಆಗಲಿ ಅವರಲ್ಲಿಯೂ ಸಹ ವಿಶ್ವಾಸ ಮೂಡಿಸುವ ವ್ಯಾಖ್ಯಾವಾಗಿದೆ.

 

ನಮ್ಮ ಹಿಂದಿನಿಂದ ಹೇಳುತ್ತಾ ಬರುವಂತೆ ಮನೆಯೇ ಮೊದಲ ಪಾಠಶಾಲೆ ತಾಯಿ ತಾನೇ ಮೊದಲ ಗುರು

        ನಮ್ಮ ಶಿಕ್ಶಣವು ನಮ್ಮ ಮನೆಯಿಂದಲೇ ಪ್ರಾರಂಭವಾಗುತ್ತದೆ. ತಂದೆ ತಾಯಿ ಇಬ್ಬರು ತಮ್ಮ ಆಚಾರ ವಿಚಾರಗಳನ್ನು ತಿಳಿಸುತ್ತಾರೆ.  ತಪ್ಪು ಮಾಡಿದಾಗ ದಂಡಿಸಿ, ತಿಳಿಯದಿದ್ದಾಗ ಪ್ರೀತಿಸಿ , ಹಿರಿಯರು, ಕಿರಿಯರ ಮುಂದೆ ಹೇಗೆ ವರ್ತಿಸಬೇಕೆಂದು ತಾನು ನಡೆದು ತಿಳಿಸುತ್ತಾಳೆ.ಹೀಗೆ ಈ ರೀತಿಯಾಗಿ ತಾಯಿ ನಮ್ಮಲ್ಲಿ ಅರಿವು ಮೂಡಿಸಿ ಮೊದಲ ಶಿಕ್ಷಕಿಯಾಗುತ್ತಾಳೆ.  

ಎರಡನೇ ಹಂತದಲ್ಲಿ

ಇಲ್ಲಿ ಶಿಕ್ಷಕರ ಶಿಕ್ಷಣ ಮಹತ್ವವಾದ ಪಾತ್ರವನ್ನು ಹೊಂದಿರುತ್ತದೆ.

ಮುಂದೆ ಆ ತಂದೆ ತಾಯಿ  ಅರ್ಧವಾದ ಶಿಲೆಯನ್ನು ಪೂರ್ಣವಾಗಲೆಂದು ಶಾಲೆಗೆ ಕಳಸುತ್ತಾರೆ. ಅಲ್ಲಿ ವಿದ್ಯಾರ್ತಿ( ಇಲ್ಲಿ ವಿದ್ಯಾರ್ಥಿ ಶಬ್ದವನ್ನು ಅರಿತುಕೊಳ್ಳಬೇಕು ವಿದ್ಯಾರ್ಥಿ ಅಂದರೆ ವಿದ್ಯೆಯನ್ನು ಆರ್ಜನೆ ಮಾಡಿಕೊಳ್ಳವರು ಎಂದರ್ಥ).

          ಶಿಕ್ಷಕರು ಜ್ಞಾನವನ್ನು ಭೋರ್ಗರೆಯಲು ಆರಂಭಿಸುತ್ತಾರೆ, ಇಲ್ಲಿಯೂ ಸಹ ಶಿಕ್ಷಕರು ತಪ್ಪು ಮಾಡಿದಾಗ ದಂಡಿಸಿ ವಿದ್ಯಾರ್ಥಿಗಳು ತಮ್ಮ ಮಕ್ಕಳೆಂದು ಭಾವಿಸಿ ಎಲ್ಲರಿಗೂ ಸಮಾನವಾಗಿ, ಬೆದ ಭಾವ ಇರದೇ ಶಿಕ್ಷಣೆ ನೀಡುತ್ತಾರೆ. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಗೆದ್ದಾಗ ಶ್ಲಾಘಿಸಿ ಸೋತಾಗ ಮನೋದೈರ್ಯವನ್ನು ತುಂಬಿ ನಮ್ಮ ಮುಂದಿನ ಗುರಿಗೇ ಮಹತ್ವವಾಗಿ ಪಾತ್ರವಹಿಸುತ್ತಾರೆ.

            ಆಟದಿಂದ ಧೈಹಿಕ ಶಿಕ್ಷಣ ಪಾಠದಿಂದ ಮಾನಸಿಕ ಸ್ಥೈರ್ಯ ಉಂಟಾಗುತ್ತದೆ. ಆದ್ದರಿಂದ ಶಾಲೆಗಳಲ್ಲಿ ಅಂತಹ ಆಟಗಳನ್ನುನಾಡಿಸುತ್ತಾರೆ. ಉದಾಹರಣೆ ನೋಡುವದಾದರೆ ಕಬಡ್ಡಿ ಈ ಆಟವು ಮಕ್ಕಳಲ್ಲಿ ಏಕಾಗ್ರತೆಯನ್ನು ಬೆಳಿಸುವ ಆಟವಾಗಿದೆ. ಖೋಖೋ ಆಟವು ನಮ್ಮ ನಿರ್ಧಿಷ್ಟ ಗುರಿಯನ್ನು ಮುಟ್ಟುವಲ್ಲಿ  ಸಹಾಯ ಮಾಡುತ್ತದೆ ಹೇಗೆಂದರೆ ನಮ್ಮಲ್ಲಿ ಎಷ್ಟೇ ಅಡೆತಡೆಗಳು ಇದ್ದರು ನಾವು ನಮ್ಮ ಗುರಿಯನ್ನು ಬಿಡಬಾರದು ಎನ್ನುವ ಸಂದೇಶ ಕೊಡುತ್ತದೆ. 

          ಮುಂದೆ ಆ ವಿದ್ಯಾರ್ಥಿಯು ವಿದ್ಯಾರ್ಜನೆ ಮಾಡಲು ಆರಂಭಿಸುತ್ತಾರೆ, ಮೊದಮೊದಲು ಶಿಕ್ಷಕರು ಸ್ನೇಹಿತರು ಅಪರಿಚಿತರಾಗಿರುತ್ತಾರೆ. ಮುಂದೆ ಹೋದಂತೆ ಎಲ್ಲರೂ ನಮ್ಮವರು ಎನ್ನುವ ಭಾವನೆ ಉಂಟಾಗುತ್ತದೆ. ಮುಂದೆ ಹೋದಂತೆ ವಿದ್ಯಾರ್ಥಿಯು ಹೊಸ ಹೊಸ ವಿಷಯಗಳನ್ನು ಕಲಿಯಲು ಆರಂಭಿಸುತ್ತಾನೆ. ಮೊದಲು ತನ್ನ ಮಾತೃಭಾಷೆ ನಂತರ ಬೇರೆ ಭಾಷೆಯನ್ನು ಕಲಿಯಲು ಆರಂಭಿಸುತ್ತಾನೆ.

"ಹಣವನ್ನು ಗಳಿಸಿದರೆ ಯಾರಾದರು ಧೋಚಬಹುದು

ವಿದ್ಯೆಯನ್ನು ಗಳಿಸಿದರೆ ಯಾರಿಂದಲೂ ಅಪಹರಿಸಲು ಸಾಧ್ಯವಿಲ್ಲ"

ಆದ್ದರಿಂದ ಈ ಮೇಲಿನ ವ್ಯಾಕ್ಯದಲ್ಲಿ ಶಿಕ್ಷಣ ಎಂತಹ ಮಹತ್ವದ್ದು ಎನ್ನುವುದು ಕಂಡುಬರುತ್ತದೆ.


ಶ್ರೀಹರಿ ರಾಜಪುರೋಹಿತ
MBA ವಿದ್ಯಾರ್ಥಿ

Back To Top